ಸಮನ್ವಯ ಸ್ಕೂಲ್ ಆಫ್ ಸಂಸ್ಕಾರ

SAMANVAYA SCHOOL OF SAMSAKARA

ಸಮನ್ವಯ ಸ್ಕೂಲ್ ಆಫ್ ಸಂಸ್ಕಾರ

ವಿಭಿನ್ನ ಶೈಕ್ಷಣಿಕ ಸಂಸ್ಕೃತಿಯ ವಿನೂತನ ಹೆಜ್ಜೆ

ಅರಿವಿನ ಸಂಸ್ಕಾರದ ಬಲದಿಂದ ಮನುಷ್ಯನ ಜೀವನ ಸಾರ್ಥಕ್ಯದ ಎತ್ತರ ತಲುಪಿಕೊಳ್ಳುವುದು. ವಿವಿಧ

ಬಗೆಯ ಅಡೆತಡೆಗಳನ್ನು ದಾಟಿಕೊಂಡು ಸಮಷ್ಠಿಯ ಒಳಿತಿಗೆ ತುಡಿಯುವ ಮನಃಸ್ಥಿತಿ ಕಂಡುಕೊಂಡು ವ್ಯಕ್ತಿಗತ

ಮತ್ತು ಸಾಮಾಜಿಕ ಬದುಕಿನ ಪ್ರಭೆ ಹೆಚ್ಚಿಸಿಕೊಳ್ಳುವುದು ಈ ಕಾಲದ ಜೀವಪರ ಅನಿವಾರ್ಯತೆ. ಈ ಬಗೆಯ

ಎಚ್ಚರವು ಹೊಸ ಪೀಳಿಗೆಯ ಭವಿಷ್ಯದ ಹಾದಿಯನ್ನು ಉಜ್ವಲಗೊಳಿಸುತ್ತದೆ. ಅಷ್ಟೇ ಅಲ್ಲ, ಜಗತ್ತಿಗೆ ಬೆಳಕು

ತೋರುವ ವ್ಯಕ್ತಿತ್ವಗಳ ರೂಪಿಸುವಿಕೆಗೆ ಅಡಿಪಾಯ ಹಾಕಿಕೊಡುತ್ತದೆ. ಅನೇಕ ಬಗೆಯ ಬದಲಾವಣೆಗಳಿಗೆ

ಕಾರಣವಾಗುತ್ತದೆ. ಆ ಮೂಲಕ ಒಳಿತಿನ ಕಡೆಗಿನ ಮನುಷ್ಯ ಪಯಣ ನಿರಂತರ ಯಶಸ್ಸಿನ ಜೊತೆಗೆ ಸಾಗುತ್ತಲೇ

ಇರುತ್ತದೆ. ಇಂಥದ್ದೊಂದು ಎಚ್ಚರದ ಪ್ರಜ್ಞೆಯ ಬಲದೊಂದಿಗಿನ ದೃಢವಿಶ್ವಾಸದೊಂದಿಗೆ ಸಮನ್ವಯ ಸಂಸ್ಥೆಯು

ಹೊಸದೊಂದು ಹೆಜ್ಜೆಯಿಟ್ಟಿದೆ. ನೂತನ ಕಲಿಕಾಕ್ರಮಗಳನ್ನು ರೂಪಿಸಿ ಜೀವಪರ ಮೌಲ್ಯಗಳ ಸಂಸ್ಕಾರ ರೂಢಿಸಿ

ವಿನೂತನ ಶೈಕ್ಷಣಿಕ ಸಂಸ್ಕೃತಿಯನ್ನು ಹುಟ್ಟುಹಾಕುವ ಚಿಂತನೆಯೊಂದಿಗೆ ‘ಸಮನ್ವಯ ಸ್ಕೂಲ್ ಆಫ್ ಸಂಸ್ಕಾರ’

ಕಾರ್ಯಾರಂಭಿಸಿದೆ.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸೇವಾ ಮನೋಭಾವದ ಸಂಕಲ್ಪದೊಂದಿಗೆ ಶಿವಮೊಗ್ಗವನ್ನು

ಕೇಂದ್ರವಾಗಿಸಿಕೊಂಡು ರಾಜ್ಯದಾದ್ಯಂತ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ‘ಸಮನ್ವಯ’

ಸಂಸ್ಥೆಯು ಮಕ್ಕಳಲ್ಲಿ ಸಂಸ್ಕಾರ ರೂಢಿಸುವ ಉದಾತ್ತ ಯೋಚನೆಯೊಂದಿಗೆ ಈ ಶಾಲೆಯನ್ನು ಆರಂಭಿಸಿದೆ.

ಭಾರತೀಯ ಪರಂಪರೆಯ ಶ್ರೇಷ್ಠತೆಯನ್ನು ಪರಿಚಯಿಸುವ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ ಬದುಕನ್ನು

ಸಂಸ್ಕರಿಸಿಕೊಳ್ಳುವ ಸ್ವಯಂವಿವೇಚೆನಯನ್ನು ಜಾಗೃತಗೊಳಿಸುವ ಚಲನಶೀಲ ಪಠ್ಯವೇ ಈ ಶಾಲೆಯ ಜೀವಾಳ.

ಭವಿಷ್ಯದಲ್ಲಿ ಎದುರುಗೊಳ್ಳಲಿರುವ ಹಲವು ಸವಾಲುಗಳನ್ನು ಎದುರಿಸುವ ಸ್ಥೈರ್ಯ ನೆಲೆಗೊಳಿಸಿ ನಾಳಿನ

ನಾಗರಿಕರನ್ನು ಇಂದಿನಿಂದಲೇ ಸನ್ನದ್ಧಗೊಳಿಸುವ ದೂರದೃಷ್ಟಿಯೇ ಇದರ ಶಕ್ತಿ. ಸ್ವಯಂ ವಿವೇಕದ ಸಂಸ್ಕಾರ ನಿಷ್ಠೆ

ಬಲಗೊಳಿಸಿ ಜ್ಞಾನವನ್ನು ಧಾರೆಯೆರೆಯುವ ಉದ್ದೇಶವೇ ಇದರ ಬೆಳಕು.

ಮಕ್ಕಳು ಯಂತ್ರಗಳಲ್ಲ. ಅವರು ಸಂಪನ್ಮೂಲಗಳು. ಕ್ರಿಯಾಶೀಲ ಶಿಲ್ಪವಾಗುವ, ಕಲೆಯಾಗಿ

ಅರಳಿಕೊಳ್ಳುವ, ಜಗತ್ತಿಗೆ ಶಾಶ್ವತ ಖುಷಿ ದಾಟಿಸಬಲ್ಲ ಅಪೂರ್ವ ಶಕ್ತಿ ಅವರೊಳಗಿರುತ್ತದೆ. ಅದು

ಸಂಪನ್ಮೂಲವಾಗಿ ಪಲ್ಲಟಗೊಂಡು ತಿರುವು ಪಡೆದುಕೊಳ್ಳುವುದು ಬಾಲ್ಯದಲ್ಲಿಯೇ. ಅವರ ಬಾಲ್ಯ ಅವರದ್ದೇ ಆದ

ಅಮೂಲ್ಯ ಸ್ವತ್ತು. ಭಿನ್ನವಾದದ್ದೊಂದು ಲೋಕದಲ್ಲಿ ಸುತ್ತಾಡಿದ ಅನುಭವ ದಕ್ಕುವುದು ಬಾಲ್ಯದಲ್ಲಿಯೇ. ಇಂಥ

ಸುಂದರ ನಮ್ಯಗುಣದ ಬಾಲ್ಯವನ್ನು ಪೋಷಕರು ತಮ್ಮದೇ ಆದ ಪೂರ್ವಗ್ರಹಪೀಡಿತ ಸಂಕುಚಿತ ದೃಷ್ಟಿಕೋನದ

ಮೂಲಕ ಕಟ್ಟಿಹಾಕುತ್ತಾರೆ. ತಮ್ಮದೇ ನಡೆಯಬೇಕು ಎಂಬ ಹಠದ ಭಾವದಲ್ಲಿ ಮಕ್ಕಳನ್ನು ಘಾಸಿಗೊಳಿಸುತ್ತಾರೆ.

ಇದರ ಬದಲಾಗಿ ಅವರ ಬಾಲ್ಯದ ಲೋಕವನ್ನು ಮಗುವಿನ ಮುಗ್ಧತೆಯೊಂದಿಗೆ ಪ್ರವೇಶಿಸಿ ಅವರ

ಒಲವುನಿಲುವುಗಳನ್ನು ತಿಳಿದುಕೊಂಡರೆ ಅವರ ಕಲಿಕೆಯ ಹಾದಿ ಎಂಥದ್ದಾಗಿರಬೇಕು ಎಂಬುದನ್ನು ಸ್ಪಷ್ಟವಾಗಿ

ನಿರ್ಧರಿಸಬಹುದು. ‘ಸಮನ್ವಯ ಸ್ಕೂಲ್ ಆಫ್ ಸಂಸ್ಕಾರ’ ಹೀಗೆ ನಿರ್ಣಯಿಸುವ ಶಕ್ತಿ ಸಾಮರ್ಥ್ಯಕ್ಕೆ ಬೇಕಾದ

ಪೂರಕ ವಾತಾವರಣವನ್ನು ಹೊಂದಿದೆ. ಪಾಲಕರು ಮತ್ತು ಮಕ್ಕಳು – ಎರಡೂ ವಲಯವನ್ನು ಉಜ್ವಲ ಭವಿಷ್ಯದ

ಹಿತದೃಷ್ಟಿಯ ನೆಲೆಯಲ್ಲಿ ಪ್ರಬಲಗೊಳಿಸುತ್ತದೆ. ಮಕ್ಕಳ ಮೂಲಕ ಹಿರಿಯರು, ಹಿರಿಯರ ಮೂಲಕ ಮಕ್ಕಳು

ಕ್ಷಣಕ್ಷಣವೂ ಸಂಸ್ಕಾರದ ಮೌಲ್ಯವನ್ನು ಪರಸ್ಪರ ದಾಟಿಸಿಕೊಂಡು ಉದಾತ್ತವಾಗುವ ಕ್ರಮಗಳನ್ನು ಈ ಶಾಲೆ

ದಾಟಿಸುತ್ತದೆ. ಬೆಳೆವ ಸಿರಿ ಮೊಳಕೆಯಲ್ಲಿ ಎನ್ನುವ ತಾತ್ವಿಕತೆಯನ್ನು ವಾಸ್ತವವಾಗಿಸುತ್ತದೆ. ಬೆಳೆಯುವ

ಸಿರಿಸಂಪನ್ಮೂಲಗಳಾದ ಮಕ್ಕಳೊಳಗೇ ಇರುವ ಮೊಳಕೆಯೊಡೆಯುವ ಗುಣವನ್ನೇ ಆಧರಿಸಿ ಅವರನ್ನು

ಸಂಸ್ಕಾರವಂತರನ್ನಾಗಿಸುತ್ತದೆ. ಬದುಕನ್ನು ಪ್ರೀತಿಸುತ್ತಲೇ ಶಿಕ್ಷಣದ ವಿವಿಧ ಹಂತಗಳನ್ನು ದಾಟಿಕೊಳ್ಳುವ

ಮನೋಸ್ಥೈರ್ಯ ಗಟ್ಟಿಗೊಳಿಸಿ ಸಾರ್ಥಕತೆ ಪಡೆದುಕೊಳ್ಳಲು ನೆರವಾಗುತ್ತದೆ.

ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ – ಹೀಗೆ ಶಿಕ್ಷಣದ ವಿವಿಧ

ಹಂತಗಳನ್ನು ದಾಟಿಕೊಳ್ಳುವ ಕಾಲಕ್ಕೆ ಕಲಿಕೆಯ ಸ್ವರೂಪ ಸಮಗ್ರವಾಗಿರಬೇಕಾಗುತ್ತದೆ. ಕಲಿಕೆ ಎನ್ನುವುದು

ಯಾಂತ್ರಿಕವಲ್ಲ. ಅದು ಅಪ್ಪಟ ಜೈವಿಕ ಕ್ರಿಯೆ. ಕಲಿಸುವ ಮಮಕಾರದ ಅಂತಃಕರಣವೇ ಇಲ್ಲಿ ಮುಖ್ಯವಾಗುತ್ತದೆ.

ಕಲಿಯುವ ಮುಗ್ಧತೆಯೇ ಜ್ಞಾನ ಪಡೆದುಕೊಳ್ಳಲು ಸಹಾಯಕವಾಗುತ್ತದೆ. ಮುಂದಿನ ಎಲ್ಲ ಹಂತಗಳಲ್ಲೂ ಪ್ರಾಥಮಿಕ

ಹಂತದಲ್ಲಿ ಜೊತೆಯಾದ ಕಲಿಕಾ ಸಂಸ್ಕಾರವೇ ನಿರ್ಣಾಯಕವೆನ್ನಿಸುತ್ತದೆ. ಈ ಸಂಸ್ಕಾರದ ಆಧಾರದಲ್ಲಿಯೇ

ಮಗುವಿನ ವಿಕಾಸವಾಗುತ್ತದೆ. ಈ ವಿಕಾಸಕ್ಕೆ ಜೈವಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ, ಸಾಂಸ್ಕತಿಕ

ಸ್ವರೂಪಗಳಿರುತ್ತವೆ. ಇದು ಸರ್ವತೋಮುಖ ವಿಕಾಸ. ಯಾರು ಈ ಬಗೆಯ ವಿಕಾಸದೊಂದಿಗೆ ಗುರುತಿಸಿಕೊಂಡು

ಮುಂದಡಿಯಿಡುತ್ತಾರೋ ಅವರು ತಮ್ಮ ಬದುಕನ್ನೂ ಉದಾತ್ತಗೊಳಿಸಿಕೊಳ್ಳುತ್ತಾರೆ. ಸಾಮಾಜಿಕ ಬದುಕನ್ನೂ

ಉದಾತ್ತಗೊಳಿಸುತ್ತಾರೆ. ಪಡೆದ ಶಿಕ್ಷಣವನ್ನು ಸಂಸ್ಕಾರಯುತ ಸಮಾಜದ ನಿರಂತರ ಅಸ್ತಿತ್ವಕ್ಕಾಗಿ

ವಿನಿಯೋಗಿಸುತ್ತಾರೆ. ತಾವು ಪಡೆದ ಸಂಸ್ಕಾರವನ್ನು ಮತ್ತೆ ಸಮಾಜಕ್ಕೇ ಮರಳಿಸುವ ಈ ಬಗೆಯ ಪ್ರಜ್ಞೆಯನ್ನು

ಮೂಡಿಸಿ ಆ ಮೂಲಕ ಹೊಸದೊಂದು ಪ್ರಯೋಗವನ್ನು ನಿರೂಪಿಸುವ ಯೋಜನಾಬದ್ಧ ಚಿಂತನೆ ‘ಸಮನ್ವಯ

ಸ್ಕೂಲ್ ಆಫ್ ಸಂಸ್ಕಾರ’ದ್ದು. ಈ ಶಾಲೆಯು ಬಾಲ್ಯದ ತೋಟದಲ್ಲಿ ಸುತ್ತಾಡುತ್ತಿರುವ ಮಕ್ಕಳಿಗೆ ಸಂಸ್ಕಾರದ

ಅನರ್ಘ್ಯ ಹೂರತ್ನಗಳನ್ನು ಪರಿಚಯಿಸಿ ಜ್ಞಾನದ ಅನಂತತೆಯನ್ನು ಮನಗಾಣಿಸುತ್ತದೆ.

ನಮ್ಮ ದೇಶ, ಇಲ್ಲಿಯೇ ಆಗಿಹೋದ ಮಹನೀಯರು,, ಅವರ ಅಮೂಲ್ಯ ಕೊಡುಗೆಗಳು, ಅವುಗಳ ಬೆಳಕಿನ

ಹಾದಿ, ಒಳ್ಳೆಯದನ್ನು ಯೋಚಿಸುವ ರೀತಿ-ನೀತಿ, ಆಹಾರದ ಆದ್ಯತೆಗಳು, ವೇದೋಪನಿಷತ್ತುಗಳ ಸದ್ವಿಚಾರ,

ದೈಹಿಕ-ಮಾನಸಿಕ ಶಕ್ತಿ ವಿಸ್ತರಿಸಿಕೊಳ್ಳುವ ಮಾರ್ಗೋಪಾಯಗಳು – ಇವೆಲ್ಲವುಗಳ ಕುರಿತಾಗಿ ಮಕ್ಕಳಿಗೆ ಈ ಶಾಲೆ

ದಿಗ್ದರ್ಶನ ತೋರುತ್ತದೆ. ಯೋಗದ ಮಹತ್ವವನ್ನು ಪರಿಚಯಿಸುತ್ತದೆ. ಅನುಭವಿ ತಜ್ಞರಿಂದ ಅಭ್ಯಾಸದ ಕ್ರಮಗಳ

ತರಬೇತಿ, ಶಿಕ್ಷಣವನ್ನು ಬದುಕಿಗೆ ಅನ್ವಯಿಸಿಕೊಳ್ಳುವ ಮಾರ್ಗದರ್ಶನ, ಬುದ್ಧಿ ತೀಕ್ಷ್ಣತೆ ಹೆಚ್ಚಿಸುವ ವಿಧಾನಗಳ

ವಿವರಗಳು, ಆಹಾರ-ಆರೋಗ್ಯ- ಶಿಕ್ಷಣ ನಡುವಿನ ಸಮನ್ವಯತೆ ಮನಗಾಣಿಸುವಿಕೆಯ ಪ್ರಯತ್ನಗಳೊಂದಿಗೆ ಈ

ಶಾಲೆ ತನ್ನನ್ನು ಮತ್ತೆ ಮತ್ತೆ ಪುನರ್ ರೂಪಿಸಿಕೊಳ್ಳುತ್ತದೆ. ಅಂಥದ್ದೊಂದು ಯೋಚನೆಯೊಂದಿಗೇ ಬೆಳವಣಿಗೆಯ

ಹಾದಿ ಕ್ರಮಿಸುವ ಉದ್ದೇಶ ಹೊಂದಿದೆ.

ಶಿವಮೊಗ್ಗದ ನೋಂದಾಯಿತ ಸಂಸ್ಥೆಯಾಗಿರುವ ‘ಸಮನ್ವಯ’ ಉದಾತ್ತ ಧ್ಯೇಯಗಳೊಂದಿಗೆ

ಕಾರ್ಯನಿರ್ವಹಿಸುತ್ತಿದೆ. ಯುವಜನತೆಯ ಸರ್ವತೋಮುಖ ಬೆಳವಣಿಗೆ, ಮಕ್ಕಳು,ಹದಿಹರೆಯದವರು, ಯುವಕರು,

ಮಹಿಳೆಯರ ಜೀವನ ಕೌಶಲ್ಯ ಹೆಚ್ಚಳ, ಕನ್ನಡ ನಾಡು-ನುಡಿಯ ಪ್ರಜ್ಞ ಬೆಳೆಸುವಿಕೆ, ಸ್ಥಳೀಯ ಕಲೆಗಳ ಹಿರಿಮೆ

ಪರಿಚಯಿಸುವಿಕೆ, ವೃದ್ಧರು-ಮಕ್ಕಳು- ಯುವಕರ ನಡುವಿನ ಅಂತರ ಕಡಿಮೆಗೊಳಿಸಿ ಕೌಟುಂಬಿಕ ಸಂಬಂಧಗಳ

ಮೌಲ್ಯ ಎತ್ತರಿಸುವಿಕೆ, ಸ್ವಸ್ಥ ಸಮಾಜದ ನಿರ್ಮಾಣದ ಧ್ಯೇಯೋದ್ದೇಶಗಳೊಂದಿಗೆ ‘ಸಮನ್ವಯ’ ಸಂಸ್ಥೆ ಹಲವಾರು

ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮನ ಗೆದ್ದಿದೆ.ಅಭಿವೃದ್ಧಿಯ ಸಾಧ್ಯತೆಗಳನ್ನು ವಿಸ್ತರಿಸುವ ಜನೋಪಯೋಗಿ

ಕಾರ್ಯಚಟುವಟಿಕೆಗಳ ಮೂಲಕ ಗಮನ ಸೆಳೆದಿದೆ. ‘ಸಮನ್ವಯ ಸ್ಕೂಲ್ ಆಫ್ ಸಂಸ್ಕಾರ’ ಮತ್ತೊಂದು ಮಹ ತ್ವ

ಪೂರ್ಣ ಹೆಜ್ಜೆ.

ಶಾಲೆಯ ವಿಶೇಷತೆಗಳು:

 ಮೌಲ್ಯಾತ್ಮಕ ಸಂಸ್ಕಾರದ ಕಲಿಕೆಗೆ ಆದ್ಯತೆ

 ಭಾರತೀಯ ಸನಾತನ ಪರಂಪರೆಯ ಶೈಕ್ಷಣಿಕ ಮಾದರಿಯ ಅಡಿಪಾಯ

 ಮೌಲ್ಯಾಧಾರಿತ ಶಿಕ್ಷಣದ ಪ್ರಭೆ

 ಅಂಕಗಳ ಗಳಿಕೆಯ ಜೊತೆಗೆ ಸ್ಪರ್ಧಾತ್ಮಕ ಯುಗದ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸದ

ವಾತಾವರಣ

 ನೀತಿಯುತ ಹಾದಿಯಲ್ಲಿ ಮುನ್ನಡೆ ಸಾಧಿಸುವ ಸಕಾರಾತ್ಮಕ ಚಿಂತನೆಗಳ ಪ್ರಸರಣ

 ಮಕ್ಕಳ ಮನೋಸ್ಥೈರ್ಯ ಹೆಚ್ಚಳದ ಸೂತ್ರಗಳಿಗೆ ಮಾನ್ಯತೆ

 ಬೌದ್ಧಿಕ ವಿವೇಕ ಹೆಚ್ಚಿಸಿ ಅಪೂರ್ವ ಶೈಕ್ಷಣಿಕ ಸಾಮರ್ಥ್ಯ ರೂಢಿಸುವಿಕೆಯ ಪ್ರಕ್ರಿಯೆ

 ಆಟದಲ್ಲೇ ಪಾಠಕಲಿಕಾ ವ್ಯವಸ್ಥೆ

 ಕುತೂಹಲವನ್ನು ಸದಾ ಜೀವಂತವಾಗಿರಿಸಿಕೊಳ್ಳುವಂಥ ತರಬೇತಿ

 ಸಾವಯವ ಆಹಾರ ನೀಡುವಿಕೆ

 ವಾಹನದ ವ್ಯವಸ್ಥೆ

nammura-habba

Nammura Habba

Nammura habba at NES ground shivamogga from 23rd April 2017 to 7th May 2017.

Program includes Stalls, Cultural Programs, Special Lecture and Yoga Vismaya.

SUMMER-CAMP-min

Samanvaya Summer Camp

Samanvaya Summer Camp

ಸಮನ್ವಯ ಟ್ರಸ್ಟ್
ವಿಶೇಷ 9 ದಿನಗಳ ಬೇಸಿಗೆ ಶಿಬಿರವನ್ನು
6-16 ವರ್ಷದ ಮಕ್ಕಳಿಗೆ
ಏಪ್ರಿಲ್-2017 ರಲ್ಲಿ ಮಲೆನಾಡಿನ
ಗ್ರಾಮೀಣ ಭಾಗದಲ್ಲಿ ಆಯೋಜಿಸಲಾಗುತ್ತಿದೆ.
ಶಿಬಿರದಲ್ಲಿ ಕೃಷಿ ವಿಜ್ಞಾನ, ಯೋಗ, ವೇದ,
ಸಂಸ್ಕೃತ, ಜೀವನ ಕೌಶಲ್ಯ, ರಂಗಭೂಮಿ, 1 ದಿನದ ಪ್ರವಾಸ ,
ಚಾರಣ ಮತ್ತು
ವೃತ್ತಿ ತರಬೇತಿಯನ್ನು ಒಳಗೊಂಡಂತೆ
ಆಯೋಜಿಸಲಾಗುವುದು.
ಸರಳವಾಗಿ ಬದುಕುವ ಹಾಗೂ
ಸಕಾರತ್ಮಕವಾಗಿ ಆಲೋಚಿಸುವ
ಚಟುವಟಿಕೆಗಳನ್ನು ನೆಡೆಸಲಾಗುವುದು.
ಅನುಭವಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುವವರು.
100 ಜನರಿಗೆ ಮಾತ್ರ ಅವಕಾಶವಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
Samanvaya.ngo@gmail.com
ವಿಕಾಸ :7204825569
ಸಮನ್ವಯ ಕಾಶಿ: 9945387650

SUMMER-CAMP-min